ಗ್ರಾಮಸ್ವರಾಜ್ಯ ವೆಬ್ ಸೈಟ್ ಒಂದು ಸಾಮಾಜಿಕ ಮೊಬೈಲ್ ಆ್ಯಪ್ ಆಗಿ ನಿಮ್ಮ ಮುಂದಿದೆ. ಕರ್ನಾಟಕದ ಗ್ರಾಮೀಣ ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸಲು ಸ್ಥಾಪಿಸಲಾಗಿದೆ. ನಿಮ್ಮ ನೆಲ-ಜಲ-ಕಾಡು-ಪರಿಸರ-ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ನಿಮ್ಮಂದೊಗೆ ಹೋರಾಡಲಿದೆ. ಅದರೊಟ್ಟಿಗೆ ಪ್ರತಿಯೊಬ್ಬರ ಉದ್ಯೋಗ, ಆರೋಗ್ಯ, ಶಿಕ್ಷಣ, ಕೃಷಿ ಅಭಿವೃದ್ಧಿ, ಕೃಷಿಮಾರುಕಟ್ಟೆ ಯಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯುವ ಮಾರ್ಗದರ್ಶಿಯಾಗಿಯೂ ಕೆಲಸ ಮಾಡಲಿದೆ. ಯುವಕರಿಗೆ, ಮಹಿಳೆಯರಿಗೆ, ಸ್ವಯಂ ಉದ್ಯೋಗಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಲಿದೆ. ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿ, ಆರ್ಥಿಕ ರಕ್ಷಣಾತ್ಮಕ ಕೃಷಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಿದೆ. ವಿಶೇಷವಾಗಿ ಸ್ವಾವಲಂಬೀ ಬದುಕನ್ನು ಪಡೆದುಕೊಳ್ಳಲು ಪಂಚಾಯತಿ ರಾಜ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಂಪೂರ್ಣ ಸಹಾಯಸ್ತವಾಗಲಿದೆ.
ಗ್ರಾಮಸ್ವರಾಜ್ಯ ಮೊಬೈಲ್ ಅ್ಯಪ್ ಬಳಕೆಯಿಂದ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ಕೆಳಗಿನ ವಿಷಯಗಳಿಗಾಗಿ ನಮ್ಮನ್ನು ಬಳಸಿಕೊಳ್ಳಿ:-
• ಗ್ರಾಮಸಭೆಯನ್ನು ಹೇಗೆ ನೆಡಸಬೇಕು
• ವಾರ್ಡ್ ಸಭೆಯನ್ನು ಹೇಗೆ ನಡೆಸುವುದು
• ಯಾವ್ಯಾವ ಬೇಡಿಕೆಗಳಿಗೆ ಯಾವ ರೀತಿ ಪರಿಹಾರ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು
• ಮಹಾತ್ಮಾಗಾಂಧಿ ನರೇಗಾ ಕಾಮಗಾರಿಯಲ್ಲಿ ಕೆಲಸ ಪಡೆಯುವ ಕುರಿತು, ಮಾಡಿದ ಕೆಲಸದ ಮಜೂರಿ ಪಡೆಯುವ ಕುರಿತು
• ಪ್ರದೇಶವಾರು ಯಾವ್ ಬೆಳೆಗಳನ್ನು ಬೆಳೆಯಬೇಕು
• ಬೆಳೆದ ಬೆಳೆಗಳಿಗೆ ಮಾರುಕಟ್ಟೆಯ ಲಭ್ಯತೆ ಹೇಗಿದೆ
• ಆರ್ಥಿಕ ಸ್ವಾವಲಂಬಿಯಾಗಲು ಕೃಷಿಯೇತರ ಉದ್ಯೋಗಗಳನ್ನು ಮಾಡುವ ಕುರಿತು
• ಕೃಷಿ ಉತ್ಪಾದನೆಯಿಂದ ಸಂಸ್ಕರಣೆವರೆಗೂ ಮೌಲ್ಯವರ್ಧನೆ ಮಾಡುವ ಕುರಿತು
• ಸುರಕ್ಷಿತ ಗ್ರಾಮೀಣ ಯುವಕರು, ಕೃಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಕುರಿತು
• ವಿಶೇಷವಾಗಿ ಮಹಿಳಾ ಸ್ವಾವಲಂಬನೆ ಪಡೆಯುವ ಕುರಿತು
• ಕೃಷಿಭಾರತ ಪತ್ರಿಕೆಯ ಮುಖಾಂತರ ಕೃಷಿ ಸಾಹಿತ್ಯ ಒದಗಿಸುವುದು
• ಭೂತಾಪಮಾನವನ್ನು, ನೆರೆಹಾವಳಿ, ಬರಪರಿಸ್ಥಿತಿ ಎದುರಿಸುವುದು, ಸಾಮಾಜಿಕ ಅರಣ್ಯ ಹಾಗೂ ಬಿದಿರು ಬೆಳೆಸುವ ಕುರಿತು
• ಸಂವಿಧಾನದ ಅನುಚ್ಚೇಧ 73 ಮತ್ತು 74 ರ ತಿದ್ದುಪಡಿಯಾದ ನಂತರ ರಚನೆಗೊಂಡ ಲೋಕಲ್ ಗವರ್ನಮೆಂಟ್ ಸಾಧನೆಗಳು ವಿಶೇಷವಾಗಿ ಕೇರಳ ರಾಜ್ಯದ ಎಲ್ಲ ಪಂಚಾಯತಿಗಳು
• ನಮ್ಮಿಂದ ಸರಕಾರಗಳು ಸಂಗ್ರಹಿಸುವ ತೆರಿಗೆ ಪದ್ಧತಿಯ ಕುರಿತು
• ನಮ್ಮ ತೆರಿಗೆ ಹಣ ನಮಗೆಷ್ಟು ಬಳಕೆಯಾಗುತ್ತದೆ
• ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಒದಗಿಸಲು ಎಲ್ಲಾ ಸಹಾಯ-ಸಹಕಾರಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಮಿಂಚಂಚೆ :
[email protected]
ಮೊಬೈಲ್ : +91 9448049749