Kundapra.com
Install Now
Kundapra.com
Kundapra.com

Kundapra.com

ಕುಂದಾಪುರ ತಾಲೂಕಿನ ಹೆಮ್ಮೆಯ ಸುದ್ದಿತಾಣ - Proud Portal of Kundapura taluk

App Size: Varies With Device
Release Date: Nov 18, 2015
Price: Free
Price
Free
Size
Varies With Device

ಕುಂದಾಪುರ ತಾಲೂಕಿನ ವೈಶಿಷ್ಟ್ಯತೆಯನ್ನು ವಿಶ್ವಕ್ಕೆ ಸಾರುವ, ಬದುಕು ಕಟ್ಟಿಕೊಳ್ಳುವುದಕ್ಕಾಗಿ ಕುಂದಾಪುರ ಪರಿಸರದಿಂದ ದೂರವೇ ಉಳಿದಿರುವವರಿಗೆ ಊರಿನ ಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿ ಕನ್ನಡ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯ ಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ನಮ್ಮೂರ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಕೆಲಸ 'ಕುಂದಾಪ್ರ ಡಾಟ್ ಕಾಂ' ಮೂಲಕ ನಿರಂತರವಾಗಿ ನಡೆಯಲಿದೆ. ಹೌದು ಇದು ಕುಂದನಾಡಿಗರ ಹೆಮ್ಮೆಯ ಅಂತರ್ಜಾಲ ಪತ್ರಿಕೆ. ಆರಕ್ಕೂ ಹೆಚ್ಚು ಅಂಕಣ ಬರಹ, ವಿಶೇಷ ವರದಿ, ಸುದ್ದಿ, ಸಂದರ್ಶನ, ಯುವಜನ, ವಿವಿಧ ವಿಭಾಗಗಳಲ್ಲಿ ಲೇಖನ ಸೇರಿದಂತೆ ವಿಚಾರಪೂರ್ಣ ಅಂಶಗಳೊಂದಿಗೆ 'ಕುಂದಾಪ್ರ ಡಾಟ್ ಕಾಂ' ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಉರುಳುವ ಕಾಲಕ್ಕೆ ತಕ್ಕಂತೆ ಮತ್ತಷ್ಟು ವಿಚಾರಗಳನ್ನು ಒಳಗೊಳ್ಳಲಿದೆ.

ಪತ್ರಿಕೋದ್ಯಮದಲ್ಲಿ ಅದಾಗಲೇ ಹೊಸ ಭಾಷ್ಯ ಬರೆದಿರುವ 'ಕುಂದಾಪ್ರ ಡಾಟ್ ಕಾಂ' ಕೇವಲ ಕುಂದಾಪುರ ತಾಲೂಕಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಮುದ್ರಿತ ಪತ್ರಿಕೆಗಳಂತೆ ಇದಕ್ಕೆ ಸೀಮಿತ ವ್ಯಾಪ್ತಿಯನ್ನು ನಿರ್ಧರಿಸುವುದು ಸಮಂಜಸವೆನಿಸುವುದಿಲ್ಲ. ಕನ್ನಡ ಈ ಪೋಟರ್ಲ್ ಸಹಜವಾಗಿ ದೇಶ, ಪ್ರಾಂತ್ಯದ ಗಡಿ ಮಿರಿ ಮುಂದುವರಿಯುತ್ತದೆ. ಅದಕ್ಕೆ 32 ದೇಶಗಳಲ್ಲಿರುವ ನಮ್ಮ ಓದುಗರು, ನೋಡುಗರೇ ಸಾಕ್ಷಿ. ಒಂದು ಸುದ್ದಿಯಾಗಿರಲಿ, ವರದಿ, ಲೇಖನವಾಗಿರಲಿ ಅದು ಸಮಾಜಮುಖಿಯಾಗಿದ್ದರೆ, ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗುವಂತಿದ್ದರೇ, ನಮ್ಮೊಳಗಿನ ವೈಚಾರಿಕ ಮನೋಭಾವವನ್ನು ಪ್ರೇರೇಪಿಸುವಂತಿದ್ದರೆ ಅದು ಎಲ್ಲಿಯದೇ ವಿಚಾರವಾಗಿರಲಿ ಇಲ್ಲಿ ಪ್ರಕಟಗೊಳ್ಳುತ್ತದೆ.

ಅಂದಹಾಗೆ, ಒಮ್ಮೊಮ್ಮೆ ಕಾಣಿಸಿಕೊಳ್ಳುವ ಅಕ್ಷರ ದೋಷ, ಅನಿರೀಕ್ಷಿತವಾಗಿ ಎದುರಾಗಬಹುದಾದ ತಾಂತ್ರಿಕ ದೋಷಗಳ ಹೊರತಾಗಿಯೂ 'ಕುಂದಾಪ್ರ ಡಾಟ್ ಕಾಂ' ನಿಮಗೆ ಹಿಡಿಸಬಹುದು! ವ್ಯವಹಾರವನ್ನು ಮೀರಿದ ಕಾಳಜಿ ನಮ್ಮದು. ಸದಾ ಸಲಹೆ, ಸೂಚನೆ, ಸಹಕಾರ ನೀಡುವ ಜವಾಬ್ದಾರಿ ಮಾತ್ರ ನಿಮ್ಮದು!

Kundapra.com - A Leading kannada news portal of Kundapura taluk connecting the kundapurians around the world. Stay with us for News, information and more about Kundapura taluk and all.
Show More
Show Less
More Information about: Kundapra.com
Price: Free
Version: 2.0.2
Downloads: 8271
Compatibility: Android 4.0.3
Bundle Id: com.kundapra.news
Size: Varies With Device
Last Update: 2019-03-20
Content Rating: Everyone
Release Date: Nov 18, 2015
Content Rating: Everyone
Developer: eReleGo Technologies Pvt Ltd


Whatsapp
Vkontakte
Telegram
Reddit
Pinterest
Linkedin
Hide