Life, History and Great Works of Pandharinatha Vittala will be showcased in this App.
ಗುರು ಶುಶೂಷೆ ಮಹಾಕರ್ಮ ನಾಶನಾ। ಗುರುಪದೇಶ ಜ್ಞಾನ ಮಾರ್ಗ ಗುರು ಪ್ರಸಾದ ಲಿಂಗ ಭಂಗಕ್ಕೆ ಕಾರಣ ಎಂದು ಶ್ರೀ ವಿಜಯದಾಸರು ಹೇಳಿದಂತೆ ಶ್ರೀ ಪಂಢರಿನಾಥ ದಾಸರು ನಮಗೆ ಪೂರ್ವಸುಕೃತದಿಂದ, ತಂದೆ ತಾಯಿಗಳ ಆಶೀರ್ವಾದದಿಂದ ದೊರಕಿದರು. ಆನ್ನೋದಾರ ಮಾಡಿದರೆಂದು ಹೇಳಲು ಅಪೇಕ್ಷಿಸುತ್ತೇನೆ. ಕರ್ಮಗಳು ದೂರವಾಗಿ ಹೊಸ ಜನ್ಮ ಪ್ರಾಪ್ತವಾಯಿತು. ಜೀವನ ಗತಿ ಬದಲಾಯಿತು, ಶ್ರೀ ಗುರುಗಳ ಒಡನಾಟದಿಂದ ಜನ್ಮ ಸಾರ್ಥಕತೆ ಪಡೆಯಿತು. ನನಗೆ, ಯಜಮಾನರಿಗೆ ಮಕ್ಕಳಿಗೂ ಅಂಕಿತ ಕೊಟ್ಟು ಉದ್ಧಾರ ಮಾಡಿದರು. ಗುರುಗಳು ಸುಲಿದ ಬಾಳೆಹಣ್ಣಿನಂದದಿ ತತ್ವಜ್ಞಾನ ಬೋಧಿಸಿದರು. ಶ್ರೀಹರಿಯ ಅನುಗ್ರಹಕ್ಕೆ ಭಕ್ತಿಯೇ ಪ್ರಧಾನವೆಂದು ತಿಳಿಸಿದರು.