ಬ್ಯಾಡಗಿಯ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯು ಉತ್ತರ ಕರ್ನಾಟಕದ ಹಾವೇರಿಯಿಂದ ೧೭ ಕಿ.ಮೀ ದೂರದಲ್ಲಿದೆ. ಒಣ ಮೆಣಸಿನಕಾಯಿಗೆ ಬ್ಯಾಡಗಿಯು ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ.
ಇಸ್ವಿ ಸನ್ ೧೯೬೮ರಲ್ಲಿ ಶ್ರೀ ಮದ್ ಘನಲಿಂಗ ಚಕ್ರವರ್ತಿ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ತಮ್ಮ ಗುರುಗಳ ಹೆಸರಿನಲ್ಲಿ ಸಂಸ್ಥಾಪಿಸಿದರು. ಸಿಂದಗಿ ಮಠವು ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತನ್ನನ್ನು ಅರ್ಪಿಸಿಕೊಂಡಿದೆ.
ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಿದೆ. ಪ್ರಸ್ತುತ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ.
ಪಾಠಶಾಲೆಯು ಸಲ್ಲಿಸಿದ ಸೇವೆಯ ಅನನ್ಯತೆಯೆಂದರೆ,ಅದರ ಪ್ರಯತ್ನಗಳು ಇಡೀ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತಿವೆ ಮತ್ತು ಯಾವುದೇ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡಿಲ್ಲ ಪ್ರಾರಂಭದಲ್ಲಿ ೫ ವಿದ್ಯಾರ್ಥಿಗಳೊಂದಿಗೆ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯನ್ನು ಬ್ಯಾಡಗಿಯಲ್ಲಿ ಪ್ರಾರಂಭಿಸಲಾಯಿತು.
ಪ್ರಾರಂಭದಲ್ಲಿ ಈ ಶಾಲೆಯು ಮುಖ್ಯವಾಗಿ ಹಾವೇರಿ ಜಿಲ್ಲೆಗೆ ಸೀಮಿತವಾಗಿದ್ದ ಮಠ ಇಂದು.ವಿದ್ಯಾರ್ಥಿಗಳು ಕರ್ನಾಟಕ ಮೂಲೆ ಮೂಲೆಯಿಂದ ಧಾರ್ಮಿಕ ಶಿಕ್ಷಣಕ್ಕೆ ಆಗಮಿಸುತ್ತಿದ್ದಾರೆ. ವೀರಶೈವ ಸಮಾಜದ ಮಕ್ಕಳಲ್ಲಿನ ಧಾರ್ಮಿಕ , ಶೈಕ್ಷಣಿಕ, ಆಚಾರ ವಿಚಾರದ ಕೊರತೆಯ ದುಃಸ್ಥಿತಿ ಅರಿತು ಶ್ರೀ ಮ.ಘ.ಚ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಶಾಲೆಯನ್ನು ಸ್ಥಾಪಿಸಿದರು .