ಇಂದಿನ ಕಾಲದ ಬಹುತೇಕ ಯುವಕರ ಬದುಕಿನ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ದೊಡ್ಡಮಟ್ಟದ ಪರಿವರ್ತನೆಗೆ ಕಾರಣವಾಗಿವೆ. ಸಮಾಜದಲ್ಲಿ ನಡೆಯುವ ಘಟನೆ, ಹೇಳಿಕೆ, ವಿದ್ಯಮಾನಗಳಿಗೆ ತಕ್ಷ ಣ ಪರ ಅಥವಾ ವಿರೋಧದ ನೆಲೆಯಲ್ಲಿ ಧ್ವನಿಯೆತ್ತುವ ಏಕೈಕ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳಿವೆ.
ಜನರಲ್ಲಿ ಸ್ಮಾರ್ಟ್ ಫೋನ್‌ಗಳ ಬಳಕೆ ಹೆಚ್ಚಾಗಿದ್ದು, ಹೆಚ್ಚಿನ ಜನರು ಸುದ್ದಿ ತಿಳಿಯಲು, ಮಾಹಿತಿ ಪಡೆಯಲು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಹರಟೆ, ಭರಪೂರ ಮನರಂಜನೆಯೂ ಇಲ್ಲಿಯೇ ದೊರೆಯುತ್ತಿದೆ. ಸಂಗೀತ, ಚಿಲನಚಿತ್ರ, ವೈರಲ್ ವಿಡಿಯೋಗಳು, ಸಾಹಸ, ವಿಜ್ಞಾನ ತಂತ್ರಜ್ಞಾನದ ವಿಡಿಯೋಗಳು ಇಲ್ಲಿ ದೊರೆಯುತ್ತಿರುವುದರಿಂದ ಯುವ ಜನರನ್ನು ಸೋಷಿಯಲ್ ಮೀಡಿಯಾ ಸೂಜಿಗಲ್ಲಿನಂತೆ ಸೆಳೆದಿವೆ.
ಕಾಲ ಬದಲಾದಂತೆ ನಾವೂ ಬದಲಾದೆವೂ ಅದೇ ರೀತಿಯಲ್ಲಿ ಪತ್ರಿಕೋಧ್ಯಮ ಸಹ ಬದಲಾಗಿದೆ, ಬದಲಾದ ಕಾಲಕ್ಕೆ ತಕ್ಕಹಾಗೆ ನಾವೂ ಬದಲಾಗಿದ್ದು ಸುದ್ದಿನೌ.ಕಾಮ್ (suddinow.com) ಮೂಲಕ ಪತ್ರಿಕೋದ್ಯಮದ ಹೊಸ ಆಯಾಮಕ್ಕೆ ಕಾಲಿಟ್ಟಿದ್ದೆವೆ. ವಿನೂತನ ರೀತಿಯಲ್ಲಿ ಸುದ್ಧಿ ನೀಡುವ ಹಂಬಲದಲ್ಲಿ ನಾವಿದ್ದೆವೆ. ನಿಮ್ಮ ಸಲಹೆ ಸಹಕಾರ ಇರಲಿ.