ಬ್ಯಾಡಗಿಯ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಧಾರ್ಮಿಕ ಕೇಂದ್ರವಾಗಿದೆ. ಒಣ ಮೆಣಸಿನಕಾಯಿಗೆ ಬ್ಯಾಡಗಿ ಪಟ್ಟಣ ವಿಶ್ವ ವಿಖ್ಯಾತ ಮನ್ನಣೆ ಪಡೆದಿದೆ. ಹಾನಗಲ್ಲ ಕುಮಾರ ಶ್ರೀಗಳ ಕರಸಂಜಾತರಾಗಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು ತಮ್ಮ ಗುರುಗಳ ಹೆಸರಿನಲ್ಲಿ ಇಸ್ವಿ ಸನ್ 1968 ರಲ್ಲಿ ಬ್ಯಾಡಗಿಯಲ್ಲಿ ಸಂಸ್ಥಾಪಿಸಿದರು. ಹಾವೇರಿ, ಗದಗ ಇನ್ನಿತರ ನಗರಗಳಲ್ಲಿ ಪಾಠಶಾಲೆ ಆರಂಭಿಸಿದ ಶ್ರೀಗಳು ಸಮಾಜ ಸೇವೆಗಾಗಿ ತಮ್ಮ ಬದುಕನ್ನೆ ಸಮಾಜಕ್ಕೆ ಅರ್ಪಿಸಿದರು. ಶ್ರೀಗಳ ಲಿಂಗೈಕ್ಯದ ಬಳಿಕವೂ ಎದೆಗುಂದದ ಶಿಷ್ಯವರ್ಗ & ಭಕ್ತವೃಂದ ತಮ್ಮ ಪರಿಶ್ರಮ ಧಾರೆ ಎರೆದು ಇಂದಿಗೂ ಪಾಠಶಾಲೆಗಳನ್ನು ಜೀವಂತವಾಗಿಟ್ಟಿದ್ದಾರೆ.ಪಾಠಶಾಲೆವು ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತನ್ನನ್ನು ಅರ್ಪಿಸಿಕೊಂಡಿದೆ.
6 ಮತ್ತು 7 ನೇ ತರಗತಿಯಿಂದ ಮಕ್ಕಳಿಗೆ ಪಾಠಶಾಲೆಯಲ್ಲಿ ಪ್ರವೇಶವಿದೆ. ಪದವಿ ಹಂತದವರೆಗೂ ಶೈಕ್ಷಣಿಕ ಸೌಲಭ್ಯ ನೀಡುತ್ತದೆ. 1968ರಲ್ಲಿ ಕೇವಲ 5 ಮಕ್ಕಳಿಂದ ಪ್ರಾರಂಭವಾದ ಧಾರ್ಮಿಕ ಶಾಲೆಯಲ್ಲಿ ಪ್ರಸ್ತುತ 110 ವಟುಗಳಿದ್ದಾರೆ.